News & Events
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ ಮಾಹಿತಿ ಪತ್ರಗಳ ಪ್ರದರ್ಶನ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, 10 ಫೆಬ್ರವರಿ 2022: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಡಾ. ಜಯದೇವಿ ತಾಯಿ ಲಿಗಾಡೆ ಮತ್ತು ಕಯ್ಯಾರ ಕಿಂಞ್ಞಣ್ಣ ರೈ ಹೆಸರಿನಲ್ಲಿ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ಗಾಂಧಿ ಭವನದಲ್ಲಿ ನಡೆಯಿತು. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಗಡಿನಾಡ ಸಂತ ಶ್ರೀ ಬಿ. ಪುರುಷೋತ್ತಮ ಮಾಸ್ತರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ವಿಕಾಸ ಟ್ರಸ್ಟ್
ಮಾಹಿತಿ ಪತ್ರಗಳ ಪ್ರದರ್ಶನ
ಬೆಂಗಳೂರು, 8 ಫೆಬ್ರವರಿ 2022: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಡಾ. ಜಯದೇವಿ ತಾಯಿ ಲಿಗಾಡೆ ಮತ್ತು ಕಯ್ಯಾರ ಕಿಂಞ್ಞಣ್ಣ ರೈ ಹೆಸರಿನಲ್ಲಿ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವು 10 ಫೆಬ್ರವರಿ 2022ರಂದು ಸಂಜೆ 6.00 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ.
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ – ಒಂದು ಸ್ವಗತ
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ – ಒಂದು ಸ್ವಗತ 1956ರ ಭಾಷಾವಾರು ಪ್ರಾಂತ ಪುನರ್ವಿಂಗಡಣೆಯಿಂದಾಗಿ ಅಚ್ಚಗನ್ನಡ ಪ್ರದೇಶವಾಗಿದ್ದ ಕಾಸರಗೋಡು, ಕೇರಳಕ್ಕೆ ಸೇರಿಸಲ್ಪಟ್ಟ ವಿಷಯ ಸರ್ವವೇದ್ಯ. ನಂತರದ ವರ್ಷಗಳಲ್ಲಿ ನಿರಂತರ ತುಳಿತಕ್ಕೊಳಗಾದ ಕನ್ನಡ ಭಾಷೆ-ಸಂಸ್ಕೃತಿ ಮತ್ತು ಕನ್ನಡಿಗರಲ್ಲಿ ಆತ್ಮಾಭಿಮಾನ ವರ್ಧಿಸಲು ಹಾಗೂ ಕಾಸರಗೋಡು – ಕನ್ನಡ ಭಾಷೆಯ ಆಳವಾದ ಸಂಬಂಧವನ್ನು ಕಾಸರಗೋಡಿನ ಯುವ ತಲೆಮಾರು ಮತ್ತು ವಿಶ್ವದೆಲ್ಲೆಡೆಯ ಕನ್ನಡಿಗರ ಗಮನಕ್ಕೆ ತರುವ ಉದ್ದೇಶದಿಂದ ವಿಕಾಸ ಟ್ರಸ್ಟ್ (ರಿ.), ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ ನಡೆಸಲು ನಿರ್ಧರಿಸಿತು.
ಅಭಿನಂದನೆ ಹಾಗೂ ಧನ್ಯವಾದ
ಅಭಿನಂದನೆ ಹಾಗೂ ಧನ್ಯವಾದ 15 ಜನವರಿ 2016ರಂದು ಆರಂಭವಾಗಿ ಇಂದು 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ವಿಶ್ವವಾಣಿ ದಿನಪತ್ರಿಕೆಗೆ ಹಾರ್ದಿಕ ಶುಭಾಶಯಗಳು ಮತ್ತು ಕಾಸರಗೋಡಿನ ಕನ್ನಡಿಗರ ಕಥೆ – ವ್ಯಥೆ ಹೇಳಿಕೊಳ್ಳಲು ವಿಶ್ವವೇದಿಕೆ ಒದಗಿಸಿದ ವಿಶ್ವವಾಣಿ ಕ್ಲಬ್ ಗೆ ಅನಂತ ಧನ್ಯವಾದಗಳು. 15 ಜನವರಿ 2021ರಂದು ಬೆಂಗಳೂರಿನಲ್ಲಿ ನೋಂದಾವಣೆಗೊಂಡ ವಿಕಾಸ ಟ್ರಸ್ಟ್ (ರಿ.)ಗೂ ಇವತ್ತು ಪ್ರಥಮ ವಾರ್ಷಿಕೋತ್ಸವದ ಸಂಭ್ರಮ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್ (ರಿ.), 1 ನವೆಂಬರ್ 2021ರಿಂದ 14 ಜನವರಿ
14-01-2022, ಸಂಜೆ 7 ರಿಂದ ವಿಶ್ವವಾಣಿ ಕ್ಲಬ್ ವಿಶೇಷ ಕಾರ್ಯಕ್ರಮ: ಕಾಸರಗೋಡು ಕನ್ನಡಿಗರ ಕಥೆ-ವ್ಯಥೆ
ವಿಶ್ವವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕಾರ್ಯಕ್ರಮ ಆಮಂತ್ರಣ ನೀಡಿದ್ದಾರೆ. ಇಂದಿನ ವಿಶ್ವವಾಣಿ ಕ್ಲಬ್ ಕಾರ್ಯಕ್ರಮ pic.twitter.com/QCny4BaaHr — Vishweshwar Bhat (@VishweshwarBhat) January 14, 2022
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 74ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಸಚಿವ ಹಾಲಪ್ಪ ಆಚಾರ್
ಬೆಂಗಳೂರು, 13 ಜನವರಿ 2022 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 74ನೇ ದಿನದ ಆಶ್ರಯ ಆಶ್ರಮ, ಕನ್ಯಪ್ಪಾಡಿ ಕುರಿತಾದ ಮಾಹಿತಿ ಪತ್ರವನ್ನು ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಅವರು ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಬಿಡುಗಡೆಗೊಳಿಸಿದರು. ಕಳೆದ 74 ದಿನಗಳ ಅಭಿಯಾನದ ಮಾಹಿತಿ ಪತ್ರಗಳನ್ನು ಪರಿಶೀಲಿಸಿದ ಸಚಿವರು ಗಡಿ
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 67ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು, 6 ಜನವರಿ 2022 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 67ನೇ ದಿನದ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನ, ಅನಂತಪುರ ಕುರಿತಾದ ಮಾಹಿತಿ ಪತ್ರವನ್ನು ಕರ್ನಾಟಕ ಸರ್ಕಾರದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ವಿಕಾಸ ಸೌಧದ ತಮ್ಮ ಕೊಠಡಿಯಲ್ಲಿ ಬಿಡುಗಡೆಗೊಳಿಸಿದರು. ಕಳೆದ 67 ದಿನಗಳ ಅಭಿಯಾನದ ಮಾಹಿತಿ ಪತ್ರಗಳನ್ನು ಪರಿಶೀಲಿಸಿದ ಸಚಿವರು ಗಡಿ ಜಿಲ್ಲೆಯಾದ ಕಾಸರಗೋಡಿನ ಪ್ರಸಿದ್ಧ ವ್ಯಕ್ತಿಗಳು, ಪ್ರೇಕ್ಷಣೀಯ ಸ್ಥಳಗಳು ವಿಶೇಷವಾಗಿ
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 65ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ವಿಶ್ವೇಶ್ವರ ಭಟ್
ಬೆಂಗಳೂರು, 4 ಜನವರಿ 2022 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 65ನೇ ದಿನದ ಕಾಸರಗೋಡಿನ ನಾಲ್ಕು ಹವ್ಯಕ ಮಠಗಳು ಕುರಿತಾದ ಮಾಹಿತಿ ಪತ್ರವನ್ನು ವಿಶ್ವವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ವಿಶ್ವವಾಣಿ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು. ಕಳೆದ 65 ದಿನಗಳಿಂದ ನಿರಂತರವಾಗಿ ಸಾಗಿ ಬರುತ್ತಿರುವ ಮಾಹಿತಿ ಅಭಿಯಾನದ ಮಾಹಿತಿ ಪತ್ರಗಳನ್ನು ಕೂಲಂಕುಷವಾಗಿ ಅವಲೋಕಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಸರಗೋಡಿನ ಮತ್ತು ಅಲ್ಲಿನ ಕನ್ನಡದ ಹಿರಿಮೆಯ
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 60ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಪೇಜಾವರ ಶ್ರೀಗಳು
ಬೆಂಗಳೂರು, 30 ಡಿಸೆಂಬರ್ 2021 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 60ನೇ ದಿನದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಕುರಿತಾದ ಮಾಹಿತಿ ಪತ್ರವನ್ನು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾದ ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಬೆಂಗಳೂರಿನ ವಿದ್ಯಾಪೀಠದಲ್ಲಿ ಬಿಡುಗಡೆಗೊಳಿಸಿದರು. ಮಾಹಿತಿ ಅಭಿಯಾನದ ಅಂಗವಾಗಿ ಇದುವರೆಗೆ ಬಿಡುಗಡೆಗೊಳಿಸಿದ 60 ಮಾಹಿತಿ ಪತ್ರಗಳನ್ನು ಕೂಲಂಕುಷವಾಗಿ ವೀಕ್ಷಿಸಿ, ಪ್ರತಿಯೊಂದು ವಿಷಯದ ಕುರಿತು ನಿಯೋಗದ ವಿವರಣೆಯನ್ನು
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 37ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, 7 ಡಿಸೆಂಬರ್ 2021 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 37ನೇ ದಿನದ ಕಾಸರಗೋಡು ಮತ್ತು ಕನ್ನಡ ಶಾಲೆಗಳು ಕುರಿತಾದ ಮಾಹಿತಿ ಪತ್ರವನ್ನು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ಅವರು ವಿಧಾನ ಸೌಧದ ತಮ್ಮ ಕೊಠಡಿಯಲ್ಲಿ ಬಿಡುಗಡೆಗೊಳಿಸಿದರು. ವಿಕಾಸ ಟ್ರಸ್ಟ್ ನಿಯೋಗ ಕಾಸರಗೋಡಿನ ಕನ್ನಡ ಶಾಲೆಗಳ ಸ್ಥಿತಿ-ಗತಿ, ಕಾಸರಗೋಡು ಮತ್ತು ಕರ್ನಾಟಕದ ಬಾಂಧವ್ಯ, ಕೋವಿಡ್ ಮಹಾಮಾರಿ ನಂತರದ ಗಡಿ ಸಮಸ್ಯೆ,