News & Events
ವಿಕಾಸ ಟ್ರಸ್ಟ್ ವಾರ್ಷಿಕ ಮಹಾಸಭೆ, ರಕ್ತದಾನ ಶಿಬಿರ ಮತ್ತು ಹೆಲ್ಪ್ ಲೈನ್ ಲೋಕಾರ್ಪಣೆ
ಬೆಂಗಳೂರು, 27 ಜುಲೈ 2024: ನಗರದಲ್ಲಿ ನೆಲೆಸಿರುವ ಕಾಸರಗೋಡು ಜಿಲ್ಲೆಯ ಜನರ ಸಂಘಟನೆ ವಿಕಾಸ ಟ್ರಸ್ಟ್ ವಾರ್ಷಿಕ ಮಹಾಸಭೆಯು ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ಇಂದು ನಡೆಯಿತು. ಮಹಾಸಭೆಯನ್ನು ಟ್ರಸ್ಟಿನ ಹಿರಿಯ ಸದಸ್ಯರಾದ ಗಣೇಶ್ ಕಂಬಾರು ಅವರು ಉದ್ಘಾಟಿಸಿ, ಕಾಸರಗೋಡು ಮೂಲದ ಜನರನ್ನು ಸಂಘಟಿಸಬೇಕಾದ ಅಗತ್ಯ ಮತ್ತು ಸದಸ್ಯರು ಪರಸ್ಪರರಿಗೆ ಸಹಕರಿಸುವುದು ಮಾತ್ರವಲ್ಲದೇ ಅಚ್ಚ ಕನ್ನಡ ನೆಲವಾದ ಕಾಸರಗೋಡಿನ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿಸಿದರು. ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ
Union Council of Ministers
PRIME MINISTER Shri Narendra Modi Varanasi, Uttar Pradesh Ministry of Personnel, Public Grievances and Pensions; Department of Atomic Energy; Department of Space; All important policy issues; and All other portfolios not allocated to any Minister CABINET MINISTERS 1. Shri Raj Nath Singh Lucknow, Uttar Pradesh Minister of Defence 2. Shri Amit Shah Gandhinagar, Gujarat Minister
Karnataka Council of Ministers
1. Sri Siddaramaiah Chief Minister Varuna, Mysuru Finance, Cabinet Affairs, Department of Personnel and Administrative Reforms, Intelligence, Department of Information and Public Relations and all unallocated portfolios 2. Sri D.K. Shivakumar Deputy Chief Minister Kanakapura, Ramanagara Major and Medium Irrigation, Bengaluru City Development including BBMP, BDA, BWSSB, BMRDA, BMRCL (Connected to these authorities related to
Kasaragod District Map in Kannada
ಯಾವುದೇ ಹೆಸರುಗಳನ್ನು ಸ್ಪಷ್ಟವಾಗಿ ಉಚ್ಛರಿಸಬೇಕಿದ್ದರೆ ಅವು ನಮ್ಮ ಮಾತೃಭಾಷೆಯಲ್ಲಿ ಬರೆದಿರಬೇಕು. ಈ ದೃಷ್ಟಿಯಿಂದ ಕಾಸರಗೋಡು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತುಗಳ, ಬ್ಲಾಕ್ ಪಂಚಾಯತುಗಳ, ವಿಧಾನಸಭಾ ಕ್ಷೇತ್ರಗಳ, ತಾಲೂಕುಗಳ ಹೆಸರುಗಳನ್ನು ಕನ್ನಡ ಭಾಷೆಯಲ್ಲಿ ದಾಖಲಿಸಿರುವ ಕಾಸರಗೋಡು ಜಿಲ್ಲಾ ನಕ್ಷೆಯನ್ನು ವಿಕಾಸ ಟ್ರಸ್ಟ್ (ರಿ.) ತಯಾರಿಸಿದೆ.
ಅನಂತಪುರ ಕ್ಷೇತ್ರದಲ್ಲಿ ಮಾಹಿತಿ ಪತ್ರಗಳ ಪ್ರದರ್ಶನ
ಅನಂತಪುರ, 26 ಫೆಬ್ರವರಿ 2022: ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದ Website ನ ನವೀಕೃತ ವಿನ್ಯಾಸ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಬ್ಯಾಂಕ್ ಖಾತೆಯ UPI QR Code ಮತ್ತು ಶ್ರೀ ಕ್ಷೇತ್ರದ ಭಕ್ತಾಭಿಮಾನಿಗಳಿಗೆ ಮಾಹಿತಿ ನೀಡಲು ದೇವಳದ WhatsApp ನಂಬರ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ (ರಿ.) ಸಂಸ್ಥೆಯು ನಡೆಸಿದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ
ಸತ್ಯನಾರಾಯಣ ಬೆಳೇರಿ ಅವರನ್ನು ಅಭಿನಂದಿಸಿದ ಕರ್ನಾಟಕದ ಕೃಷಿ ಸಚಿವ ಬಿ.ಸಿ. ಪಾಟೀಲ್
ಬೆಂಗಳೂರು, 15 ಫೆಬ್ರವರಿ 2022: ಕರ್ನಾಟಕ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್ ಅವರು ಕಾಸರಗೋಡಿನ ಕೃಷಿಕ, ಭತ್ತದ 650ಕ್ಕೂ ಹೆಚ್ಚಿನ ಮೂಲತಳಿಗಳ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅವರ ಸಾಧನೆಯ ಕುರಿತು ತಿಳಿದು ಕರೆ ಮಾಡಿ ಅಭಿನಂದಿಸಿದರು. ವಿಕಾಸ ಟ್ರಸ್ಟ್ (ರಿ.) ಇತ್ತೀಚೆಗೆ ನಡೆಸಿದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ 30ನೇ ದಿನ ಇವರ ಸಾಧನೆಯ ಕುರಿತು ಮಾಹಿತಿ ಪತ್ರ ಬಿಡುಗಡೆ ಮಾಡಿತ್ತು. ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ ಅವರು ಇಂದು ಸಚಿವರನ್ನು ಅಧಿಕೃತ ನಿವಾಸದಲ್ಲಿ
ದಶಮಾನೋತ್ಸವ ಸಂಭ್ರಮದಲ್ಲಿರುವ ಪಬ್ಲಿಕ್ ಟಿವಿಗೆ ಶುಭಾಶಯಗಳು
ಬೆಂಗಳೂರು, 12 ಫೆಬ್ರವರಿ 2022: ಕನ್ನಡ ಖ್ಯಾತ ಸುದ್ದಿ ವಾಹಿನಿಯಾದ ಪಬ್ಲಿಕ್ ಟಿವಿ ತನ್ನ ಸ್ಥಾಪನೆಯ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ ಅವರು ಪಬ್ಲಿಕ್ ಟಿವಿ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಆರ್. ರಂಗನಾಥ್ ಅವರನ್ನು ಪುಸ್ತಕ ನೀಡುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಹಾಗೂ ಡಿಜಿಟಲ್ ವಿಭಾಗದ ಮುಖ್ಯಸ್ಥರಾದ ಮಹೇಶ್ ಚೇವಾರ್ ಅವರು ಉಪಸ್ಥಿತರಿದ್ದರು. ಕನ್ನಡ ಪತ್ರಿಕೋದ್ಯಮ ಕ್ಷೇತ್ರದ ಅನುಭವೀ ಪತ್ರಕರ್ತರಾಗಿ ಕಳೆದ
ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ ಮಾಹಿತಿ ಪತ್ರಗಳ ಪ್ರದರ್ಶನ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, 10 ಫೆಬ್ರವರಿ 2022: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಡಾ. ಜಯದೇವಿ ತಾಯಿ ಲಿಗಾಡೆ ಮತ್ತು ಕಯ್ಯಾರ ಕಿಂಞ್ಞಣ್ಣ ರೈ ಹೆಸರಿನಲ್ಲಿ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ಗಾಂಧಿ ಭವನದಲ್ಲಿ ನಡೆಯಿತು. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಗಡಿನಾಡ ಸಂತ ಶ್ರೀ ಬಿ. ಪುರುಷೋತ್ತಮ ಮಾಸ್ತರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ವಿಕಾಸ ಟ್ರಸ್ಟ್
ಮಾಹಿತಿ ಪತ್ರಗಳ ಪ್ರದರ್ಶನ
ಬೆಂಗಳೂರು, 8 ಫೆಬ್ರವರಿ 2022: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಡಾ. ಜಯದೇವಿ ತಾಯಿ ಲಿಗಾಡೆ ಮತ್ತು ಕಯ್ಯಾರ ಕಿಂಞ್ಞಣ್ಣ ರೈ ಹೆಸರಿನಲ್ಲಿ ಸ್ಥಾಪಿಸಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವು 10 ಫೆಬ್ರವರಿ 2022ರಂದು ಸಂಜೆ 6.00 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ.