ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 65ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ವಿಶ್ವೇಶ್ವರ ಭಟ್

ಬೆಂಗಳೂರು, 4 ಜನವರಿ 2022
ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 65ನೇ ದಿನದ ಕಾಸರಗೋಡಿನ ನಾಲ್ಕು ಹವ್ಯಕ ಮಠಗಳು ಕುರಿತಾದ ಮಾಹಿತಿ ಪತ್ರವನ್ನು ವಿಶ್ವವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ವಿಶ್ವವಾಣಿ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.

ಕಳೆದ 65 ದಿನಗಳಿಂದ ನಿರಂತರವಾಗಿ ಸಾಗಿ ಬರುತ್ತಿರುವ ಮಾಹಿತಿ ಅಭಿಯಾನದ ಮಾಹಿತಿ ಪತ್ರಗಳನ್ನು ಕೂಲಂಕುಷವಾಗಿ ಅವಲೋಕಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಸರಗೋಡಿನ ಮತ್ತು ಅಲ್ಲಿನ ಕನ್ನಡದ ಹಿರಿಮೆಯ ಕುರಿತಾದ ವಿಷಯ ವೈವಿಧ್ಯವನ್ನು ಕಂಡು ಜಿಲ್ಲೆಯ ಸಮಗ್ರ ಅಧ್ಯಯನಕ್ಕೆ ಆಗಮಿಸುವ ಇಚ್ಛೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಾಸರಗೋಡಿಗರ ಕೊಡುಗೆ, ಸಮಕಾಲೀನ ಸಮಸ್ಯೆಗಳ ಕುರಿತು ನಿಯೋಗದ ಮಾತುಗಳನ್ನು ಆಲಿಸಿ, ಮುಂದಿನ ದಿನಗಳಲ್ಲಿ ಕಾಸರಗೋಡಿನ ಕುರಿತು ವಿಶ್ವವಾಣಿ ಕ್ಲಬ್ ಹೌಸ್ ಸಂವಾದ ಕಾರ್ಯಕ್ರಮ ಏರ್ಪಡಿಸುವ ನಿರ್ಧಾರ ಕೈಗೊಂಡರು.

ನಿಯೋಗದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಸತ್ಯಕಾಮ ಶರ್ಮ, ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.