ದಶಮಾನೋತ್ಸವ ಸಂಭ್ರಮದಲ್ಲಿರುವ ಪಬ್ಲಿಕ್ ಟಿವಿಗೆ ಶುಭಾಶಯಗಳು

ಬೆಂಗಳೂರು, 12 ಫೆಬ್ರವರಿ 2022:
ಕನ್ನಡ ಖ್ಯಾತ ಸುದ್ದಿ ವಾಹಿನಿಯಾದ ಪಬ್ಲಿಕ್ ಟಿವಿ ತನ್ನ ಸ್ಥಾಪನೆಯ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ ಅವರು ಪಬ್ಲಿಕ್ ಟಿವಿ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಆರ್. ರಂಗನಾಥ್ ಅವರನ್ನು ಪುಸ್ತಕ ನೀಡುವ ಮೂಲಕ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಹಾಗೂ ಡಿಜಿಟಲ್ ವಿಭಾಗದ ಮುಖ್ಯಸ್ಥರಾದ ಮಹೇಶ್ ಚೇವಾರ್ ಅವರು ಉಪಸ್ಥಿತರಿದ್ದರು.

ಕನ್ನಡ ಪತ್ರಿಕೋದ್ಯಮ ಕ್ಷೇತ್ರದ ಅನುಭವೀ ಪತ್ರಕರ್ತರಾಗಿ ಕಳೆದ 10 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಪಬ್ಲಿಕ್ ಟಿವಿ ಎಂಬ ಸುದ್ದಿ ವಾಹಿನಿ ಹಾಗೂ ಪಬ್ಲಿಕ್ ಮ್ಯೂಸಿಕ್, ಪಬ್ಲಿಕ್ ಮೂವೀಸ್, ಪಬ್ಲಿಕ್ ಡಿಜಿಟಲ್ ಮುಂತಾದ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಹೆಚ್.ಆರ್. ರಂಗನಾಥ್ ಅವರ ಸಾಧನೆ ನಿಜಕ್ಕೂ ಅದ್ಭುತ ಮತ್ತು ಪ್ರಶಂಸನೀಯ.

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ, ದೇಶದ ಹಲವು ಪ್ರಮುಖ ನಗರಗಳಲ್ಲಿ ವರದಿಗಾರ, ಕ್ಯಾಮೆರಾಮೆನ್ ಹಾಗೂ ಉತ್ತಮ ಮಾರ್ಕೆಟಿಂಗ್ ವಿಭಾಗ ಸೇರಿದಂತೆ 330ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉದ್ಯೋಗ ನೀಡಿರುವ ನಿಮ್ಮ ಸಂಸ್ಥೆ ಕರ್ನಾಟಕದ ಹೆಮ್ಮೆ.

12 ಫೆಬ್ರವರಿ 2012 ರಂದು ಆರಂಭವಾದ ಪಬ್ಲಿಕ್ ಟಿವಿ ಸುದ್ದಿ ವಾಹಿನಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿ, ನಾಡಿನ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಲಿ ಎಂದು ಹಾರೈಸುತ್ತೇವೆ.

ಅಧ್ಯಕ್ಷರು ಮತ್ತು ಸದಸ್ಯರು,
ವಿಕಾಸ ಟ್ರಸ್ಟ್ (ರಿ.)

Loading

Leave a Reply

Your email address will not be published. Required fields are marked *