ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 33ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಸಿ.ಟಿ. ರವಿ

ಬೆಂಗಳೂರು, 4 ಡಿಸೆಂಬರ್ 2021
ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 33ನೇ ದಿನದ ಮಾಹಿತಿ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಚಿಕ್ಕಮಗಳೂರು ಶಾಸಕರಾದ ಶ್ರೀ ಸಿ.ಟಿ. ರವಿ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಸಂಸ್ಕೃತಿ, ಭಾಷೆ ಉಳಿಸುವ ನಿಟ್ಟಿನಲ್ಲಿ ವಿಕಾಸ ಟ್ರಸ್ಟ್ ನಡೆಸಲು ಉದ್ದೇಶಿಸಿರುವ ಹಲವು ಯೋಜನೆಗಳ ಕುರಿತು ಸಿ.ಟಿ. ರವಿ ಅವರೊಂದಿಗೆ ವಿಚಾರ ವಿನಿಮಯ ನಡೆಸಲಾಯಿತು. ಇದುವರೆಗೆ ಬಿಡುಗಡೆಗೊಳಿಸಿದ 33 ಮಾಹಿತಿ ಪತ್ರಗಳನ್ನು ಆಸಕ್ತಿಯಿಂದ ವೀಕ್ಷಿಸಿದ ಸಿ.ಟಿ. ರವಿ ಅವರು ಕಾಸರಗೋಡಿನ ಸಾಂಸ್ಕೃತಿಕ ಹಿರಿಮೆಯ ಕುರಿತು ಅಭಿಮಾನ ವ್ಯಕ್ತಪಡಿಸಿದರು. ವಿಕಾಸ ಟ್ರಸ್ಟಿನ ಅಭಿಯಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮುಂದಿನ ಎಲ್ಲಾ ಕೆಲಸಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು.

ನಿಯೋಗದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಸುಖೇಶ್ ರೈ, ವಿಖ್ಯಾತ ಎನ್.ವಿ. ಉಪಸ್ಥಿತರಿದ್ದರು.

 

Loading

Leave a Reply

Your email address will not be published. Required fields are marked *