ಅಭಿನಂದನೆ ಹಾಗೂ ಧನ್ಯವಾದ

ಅಭಿನಂದನೆ ಹಾಗೂ ಧನ್ಯವಾದ

15 ಜನವರಿ 2016ರಂದು ಆರಂಭವಾಗಿ ಇಂದು 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ವಿಶ್ವವಾಣಿ ದಿನಪತ್ರಿಕೆಗೆ ಹಾರ್ದಿಕ ಶುಭಾಶಯಗಳು ಮತ್ತು ಕಾಸರಗೋಡಿನ ಕನ್ನಡಿಗರ ಕಥೆ – ವ್ಯಥೆ ಹೇಳಿಕೊಳ್ಳಲು ವಿಶ್ವವೇದಿಕೆ ಒದಗಿಸಿದ ವಿಶ್ವವಾಣಿ ಕ್ಲಬ್ ಗೆ ಅನಂತ ಧನ್ಯವಾದಗಳು.

15 ಜನವರಿ 2021ರಂದು ಬೆಂಗಳೂರಿನಲ್ಲಿ ನೋಂದಾವಣೆಗೊಂಡ ವಿಕಾಸ ಟ್ರಸ್ಟ್ (ರಿ.)ಗೂ ಇವತ್ತು ಪ್ರಥಮ ವಾರ್ಷಿಕೋತ್ಸವದ ಸಂಭ್ರಮ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್ (ರಿ.), 1 ನವೆಂಬರ್ 2021ರಿಂದ 14 ಜನವರಿ 2022ರವರೆಗೆ ನಿರಂತರವಾಗಿ 75 ದಿನಗಳ ಕಾಲ ನಡೆಸಿದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಮಾಹಿತಿ ಅಭಿಯಾನಕ್ಕೆ ಚಿನ್ನದ ಕಳಶವಿಟ್ಟಂತೆ ಸಮಾರೋಪ ದಿನವಾದ 14 ಜನವರಿ 2022ರ ಸಂಜೆ 7.00 ರಿಂದ 9.30 ರವರೆಗೆ ವಿಶ್ವವಾಣಿ ಕ್ಲಬ್ ನಲ್ಲಿ ಕಾಸರಗೋಡು ಕನ್ನಡಿಗರ ಕಥೆ – ವ್ಯಥೆ ಎಂಬ ಅಭೂತಪೂರ್ವ, ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

21 ದೇಶಗಳ ಸುಮಾರು 3,000 ಜನ ಭಾಗವಹಿಸಿದ್ದ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕಾಸರಗೋಡಿನವರ ಕೊಡುಗೆ ಎಂಬ ವಿಷಯದ ಕುರಿತು ಕಾಸರಗೋಡಿನ ಹಿರಿಯ ಸಾಹಿತಿ ಡಾ. ವಸಂತಕುಮಾರ್ ಪೆರ್ಲ ಅವರು ಹಾಗೂ ಕಾಸರಗೋಡು ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು ಕುರಿತು ಕಾಸರಗೋಡು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರು ವಿಚಾರ ಮಂಡಿಸಿದರು.

ವಿಶ್ವವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಚಾರ ಮಂಡಿಸಿದ ಗಣ್ಯರನ್ನು ಪರಿಚಯಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರು ಕರ್ನಾಟಕ ಸರ್ಕಾರ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಿದೆ ಮತ್ತು ತಾವು ಕಳೆದ ಒಂದು ವರ್ಷಗಳ ಅಧಿಕಾರಾವಧಿಯಲ್ಲಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ, ಗಣ್ಯರಾದ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ, ಗಣೇಶ್ ಭಟ್ ವಾರಣಾಸಿ, ರಂಗ ಶರ್ಮ ಉಪ್ಪಂಗಳ, ಶ್ರೀಹರ್ಷ ನೆಟ್ಟಾರು ಮತ್ತಿತರರು ಸಂದರ್ಭೋಚಿತವಾಗಿ ಮಾತನಾಡಿದರು.

ವಿಶ್ವವಾಣಿ ಪತ್ರಿಕೆಯ ಮೋಹನ್ ಕುಮಾರ್, ರೂಪಾ ಗುರುರಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ವಿಕಾಸ ಟ್ರಸ್ಟ್ ಸ್ಥಾಪನೆಯ ಉದ್ದೇಶ ಮತ್ತು ಮಾಹಿತಿ ಅಭಿಯಾನದ ಕುರಿತು ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ವಿವರಿಸಿ, ವಿಶ್ವವಾಣಿ ತಂಡಕ್ಕೆ ಮತ್ತು ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಮಕರ ಸಂಕ್ರಮಣದ ದಿನ ನಡೆದ ಈ ಕಾರ್ಯಕ್ರಮ ಕಾಸರಗೋಡು ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಸಂಸ್ಕೃತಿ-ಭಾಷೆ ಉಳಿಸುವ ನಿಟ್ಟಿನಲ್ಲಿ ಪಥ ಬದಲಾಯಿಸುವ ದಿನವಾಗಲಿ ಎಂಬ ಆಸೆ-ಆಕಾಂಕ್ಷೆ ನಮ್ಮದು. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.

ಅಧ್ಯಕ್ಷರು ಮತ್ತು ಸದಸ್ಯರು,
ವಿಕಾಸ ಟ್ರಸ್ಟ್ (ರಿ.)
15-01-2022

Loading

Leave a Reply

Your email address will not be published. Required fields are marked *